Posts

Showing posts from October, 2026

ಎಪಿಸೋಡ್ 1: ನಮ್ಮ ಬೀಳಗಿ, ನಮ್ಮ ಶಾಲೆ

Image
  ಪ್ರತಿ ಊರಿಗೂ ಒಂದು ವಾಸನೆ ಇರ್ತದ. ಆ ಜೂನ್ ತಿಂಗಳಿನ ಬೀಳಗಿಯದು: ಒದ್ದೆ ಮಣ್ಣು, ಕಬ್ಬಿನ ಗರಿ, ಚಹಾ ಅಂಗಡಿಯ ಹೊಗೆ. ಇಲ್ಲಿ ಎಲ್ಲರಿಗೂ ಎಲ್ಲರೂ ಗೊತ್ತು, ಮತ್ತು ನಿಮ್ಮ ಮಾರ್ಕ್ಸ್ ನಿಮಗಿಂತ ಮೊದಲು ನಿಮ್ಮ ಅವ್ವಗ ಗೊತ್ತಿರ್ತಿತ್ತು. ನನ್ನ ಹೆಸರು  ಜಿ . ಟಿ . ಕಾರಜೋಳ ( ಪುಟ್ಟು)   ನಾವು “ಬೆಂಚ್ ಗ್ಯಾಂಗ್” ಆದ ವರ್ಷದ ಕಥೆ ಇದು. ಬೆಳಿಗ್ಗೆ 5:30: ಮೇಟಿ ಅಣ್ಣನ ಟ್ಯೂಷನ್ ಕೋಳಿಗಳೂ ಇನ್ನೂ ಏಳಬೇಕೋ ಬ್ಯಾಡೋ ಅಂತ ಯೋಚಿಸ್ತಿದ್ದ ಹೊತ್ತಿಗೆ ನಾವು ಶ್ರೀ ರಾಮಣ್ಣ ಮೇಟಿ ಅವರ ಎದುರು ಕುಂತಿರ್ತಿದ್ವಿ. ಎಲ್ಲಾರೂ ಅವರನ್ನ ಮೇಟಿ ಅಣ್ಣ ಅಂತಿದ್ರು. ಮೇಟಿ ಅಣ್ಣ ಭಾಳ ಸ್ಟ್ರಿಕ್ಟ್. ಕೋಪ ಅಂದ್ರ ಕೋಪ, ಯಾವಾಗಲೂ ಅಂತಾನೇ ಹೇಳಬೇಕು. ಕೈಯಾಗ ಡಸ್ಟರ್ ಹಿಡಿದು ಅತ್ತಿಂದಿತ್ತ ಓಡಾಡ್ತಾ ತಮ್ಮ ಮೆಚ್ಚಿನ ಸಾಲನ್ನ ಗೊಣಗ್ತಿದ್ರು: “ಬಾರದು ಬಪ್ಪದು, ಬಪ್ಪದು ತಪ್ಪದು…” ಅಂತ. ಆಮ್ಯಾಲ ಒಮ್ಮೆಲೆ ಬೋರ್ಡಿಗೆ ದಡ್ ಅಂತ ಬಡದು, “ಈಗ ಲೆಕ್ಕ ಮಾಡ್ರಲೇ!” ಅಂತ ಗುಡುಗ್ತಿದ್ರು.   987654321X987654321= ??? ಚಿದಂಬರ ಪ್ಯಾಟಿ ಆಗಲೇ ಬಂದು ಪುಸ್ತಕ ತಗದು ತುಟಿ ಅಲ್ಲಾಡಿಸ್ತಾ ಓದ್ತಿದ್ದ; ಬಹುಶಃ 4:45ರಿಂದಲೇ ಬಂದಿರ್ತಿದ್ದ. ಜಯತೀರ್ಥ ಮೂಲ್ಯಾಗ ಸ್ನಾನ ಮಾಡಿ, ತನ್ನ ಉತ್ತರಗಳನ್ನ ದೇವರು ಚೆಕ್ ಮಾಡ್ಲಿ ಅನ್ನೋ ಹಂಗ ಭಜನೆ ಗುನುಗ್ತಿದ್ದ. ಮೂರನೇ ಸಾಲಿನಾಗ ಆನಂದ ಅಂಬೇಕರ ಕುಂತಂಗಲೇ ನಿದ್ದೆ ಹೋಗಿದ್ದ. ಮೇಟಿ ಅಣ್ಣನ ಡ...